ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್‌ನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ

Nov 1, 2024

ಮಂಗಳೂರಿನ ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ನವೆಂಬರ್ 1 ರಂದು 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಶಾಲಾ ಪ್ರಾಂಶುಪಾಲರಾದ ವಂದನೀಯ ಗುರು ಜೋಸೆಫ್ ಉದಯ ಫೆರ್ನಾಂಡಿಸ್‌ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕನ್ನಡ ರಾಜ್ಯೋತ್ಸವವು ನವೆಂಬರ್ 1 ಕ್ಕೆ ಮಾತ್ರ ಸೀಮಿತವಾಗದೆ, ಪ್ರತಿದಿನವೂ ರಾಜ್ಯೋತ್ಸವವಾಗಬೇಕು. ಅನ್ಯ ಭಾಷೆಗಳ ಜೊತೆಗೆ ಕನ್ನಡ ಭಾಷೆಗೂ ಪ್ರಾಮುಖ್ಯತೆ ನೀಡಬೇಕು. ಕನ್ನಡ ಭಾಷೆಯನ್ನು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಗಳಲ್ಲಿ ಮಾತನಾಡುತ್ತಾರೆ. ಹೀಗೆ ಕನ್ನಡ ಭಾಷೆಯು ಅದರದೇ ಸೌಂದರ್ಯವನ್ನು ಒಳಗೊಂಡಿದೆ ಎಂದು ಹೇಳಿದರು.
ಪ್ರೌಢ ಶಾಲಾ ವಿದ್ಯಾರ್ಥಿಗಳು ಡಿ.ಎಸ್. ಕರ್ಕಿ ಅವರು ರಚಿಸಿರುವ 'ಹಚ್ಚೇವು ಕನ್ನಡದ ದೀಪ' ಮತ್ತು ಕೆ.ಎಸ್. ನಿಸಾರ್ ಅಹಮ್ಮದ್‌ರವರು ರಚಿಸಿರುವ 'ನಿತ್ಯೋತ್ಸವ' ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿದರು. ಶಾಲಾ ಶಿಕ್ಷಕಿಯರು ಕನ್ನಡ ನಾಡು-ನುಡಿಯ ಕುರಿತು ಹಾಡುಗಳನ್ನು ಹಾಡಿದರು.
9ನೇ ತರಗತಿಯ ಅಜಿತ್ ಕುಮಾರ್ ಕನ್ನಡ ರಾಜ್ಯೋತ್ಸದ ಮಹತ್ವವನ್ನು ಹೇಳಿದರು. ಸಮರ್ಥ್ ರಾಜ್ ಸ್ವಾಗತಿಸಿದರು. ಇಮ್ಯಾನುವೆಲ್ ವಂದಿಸಿದರು. 8ನೇ ತರಗತಿಯ ಭವಿಷ್ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಾಡಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

TOP